Jan 6, 2010

ಕಾಡುತ್ತಿರುವ ಪುಸ್ತಕ

ಒಂದು ವರುಷದಲ್ಲಿ ಎರಡನೇ ಭಾರಿ ಓದಿಸಿಕೊಂಡ ಪುಸ್ತಕ "ವೇರ್ ಹ್ಸ್ ಮೈ ಸೀಲಿಂಗ್ ಘಾನ" ಬರೆದವರು "ಜಾನ್ ವೀಮನ್ " . ಒಬ್ಬ ಮನುಸ್ಯ ತನ್ನ ಬದುಕನ್ನು ಕಟ್ಟಿಕೊಳ್ಳುವ ರೀತಿಯನ್ನು ಬಹಳ ಅದ್ಬುತವಾಗಿ ವರ್ಣಿಸಿದ್ದಾರೆ , ನನ್ನ ಮಟ್ಟಿಗೆ ಕೆಲಸ ಹುಡುಕುತಿರುವ ಯಾವುದೇ ವ್ಯಕ್ತಿಗೆ ಪುಸ್ತಕ ಒಂದು ಅದ್ಬುತ ಊಡುಗೊರೆ, ಅದರ ಕೆಲ ಬಾಗಗಳನ್ನು ಹೇಳುತ್ತೇನೆ ಮಿಕಿದನ್ನು ಪುಸ್ತಕ ಕೊಂಡು ಓದಿ ಸ್ವಾಮಿ. ನಿಮಗೆ ಗೊತ್ತಿರುವ ಹತ್ತು ಜನರನ್ನು ಕೇಳಿ ನೋಡಿ ಜೀವನದಲ್ಲಿ ಅವರು ಏನಾಗ ಬಯಸುತಾರೆ ಅಂತ, ಎಂಟು ಜನರಿಗೆ ಅವರಿಗೆ ಏನಾಗಬೇಕು ಅನ್ನೋದೇ ಗೊತ್ತಿರಲ್ಲ. ಅವರು ಹೇಳುವ ಒಂದೇ ಉತ್ತರ ನೋಡೋಣ ಗುರು ಜೀವನ ಎಂಗೆ ಕರ್ಕೊಂಡು ಹೋಗುತ್ತೆ ಅಂತ. "ಮುಂದೆ ಗುರಿ ಹಿಂದೆ ಗುರು ಇಲ್ಲದವನ ಬದುಕು ಎಂದು ಊದ್ದರ ಆಗಲ್ಲ" ಇಲ್ಲಿ ಜಾನ್ ಹೇಳುವಂತೆ ಯಾರೇ ಆಗಲಿ ಮೊದಲು ತಾವು ಏನಾಗಬೇಕು ಅನ್ನೋದನ್ನ ನಿರ್ದರಿಸಬೇಕು. . ಮೊದಲು ನೀವು ಏನಾಗಬೇಕು ಅನ್ನೋದ್ನ ನಿರ್ದರಿಸಿ (ಧೃಡವಾಗಿ) . ಮೂರು ದಿನಗಳ ನಂತರ, ಒಂದು ಪೆನ್ನು ಪೇಪರ್ ತಗೊಂಡು ಏಕಾಂತದಲ್ಲಿ ಕುಳಿತು ಬರೆಯಲು ಶುರುಮಾಡಿ, ನೀವು ನಿಮ್ಮ ಗುರಿ ಮುಟ್ಟಲು ತಡೆಗಳು ಏನು, ಸಣ್ಣದರಿಂದ ಹಿಡಿದು ದೊಡ್ಡ ತಡೆಗಳವರೆಗೆ ಎಲ್ಲವನ್ನು ಬರೆಯಿರಿ, ಅವು ನೂರಿರಬಹುದು ಸಾವಿರವಿರಬಹುದು. ಮತ್ತೆ ಮೂರು ದಿನ ಏಕಾಂತ . ನಾಲ್ಕನೆ ದಿನ ಹಾಳೆಯನ್ನು ಹೊರಗೆಳದು ಏಕಾಂತವನ್ನು ಸೇರಿರಿ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬರೆಯಲು ಶುರುಮಾಡಿ ( ಪರಿಹಾರ ಸಣ್ಣದು ದೊಡ್ಡದು ಕಷ್ಟದು ಏನೇ ಇರಬಹುದು). ಹೀಗ ನಿಮ್ಮ ಮುಂದೆ ಸಮಸ್ಯೆ ಇದೆ ಅದಕ್ಕೆ ನಿಮ್ಮದೇ ಆದ ಪರಿಹಾರವು ಇದೆ, ಮತ್ತೆ ಮೂರು ದಿನ ಏಕಾಂತ ಸೇರಿರಿ. . ಮೂರು ದಿನ ಏಕಾಂತ ನಿಮ್ಮನ್ನು ತಳಮಳಗೊಲಿಸಿದಲ್ಲಿ, ನಿಮ್ಮ ಗುರಿ ನಿಮ್ಮನ್ನು ಕಾಡಲು ಶುರುಮಾಡಿದೆ ಅಂತಲೇ ಅರ್ಥ. ಈಗ ಹಾಳೆಗಳನ್ನು ಮತ್ತೆ ತೆಗೆದು ಏಕಾಂತ ಸೇರಿರಿ, ಈಗ ನಿಮ್ಮ ಮುಂದೆ ಸಮಸ್ಯೆ ಪರಿಹಾರ ಎರಡು ಇವೆ, ಇವನ್ನು ಕ್ರಮಬದ್ದವಾಗಿ ಜೋಡಿಸಿರಿ, ಅಂದರೆ ನೀವು ತಕ್ಷಣ ಮಾಡಲು ಆಗುವಂಥ ಕೆಲಸ, ಒಂದು ತಿಂಗಳು, ವರುಷ ಅಥವಾ ಹತ್ತು ವರುಷ. ಸ್ನೇಹಿತರೆ ನೀವೇ ಯೋಚಿಸಿ ಇಷ್ಟೆಲ್ಲಾ ಆದ್ಮೇಲೆ ನಿಮ್ಮನ್ನು ತಡೆಯುವ ಶಕ್ತಿ ಯಾರಿಗಿದೆ , ಸ್ವಲ್ಪ ಯೋಚಿಸಿ ?? ಒಂದು ಅದ್ಬುತವಾದ ಯೋಚನೆಯನ್ನು ಜಾನ್ ಸಣ್ಣ ಸಣ್ಣ ಕಥೆಗಳ ಜೊತೆ ಅದ್ಬುತವಾಗಿ ಬರೆದಿದ್ದಾರೆ , ಬದುಕಿನ ಹೊಸ್ತಿಲಲ್ಲಿರುವ ನಿಮ್ಮ ತಮ್ಮ ಅಥವಾ ನಿಮ್ಮ ತಂಗಿಗೆ , ಇದಕಿಂಥ ಉತ್ತಮ ಉಡುಗೊರೆ ಮತ್ತೇನಿದೆ. ಪುಸ್ತಕ ಓದಿ ತಿಳಿಸಿರಿ



"ವಿಹಾರಿ"