ಸಂಜೆ ಸಂತೆ

ಹುಡುಕುವ ಪ್ರಯತ್ನ ನನ್ನನ್ನ ಮತ್ತು ನನ್ನೊಳಗಿನ ನನ್ನನ್ನ. ತಪ್ಪಿಲ್ಲದೇ ಏನಾದ್ರೂ ಬರೆದಿದ್ರೆ, ಅದು ನನ್ನ ಪ್ರಾಥಮಿಕ ಶಾಲೆಯ ಮೇಷ್ಟ್ರ ಆಶೀರ್ವಾದ.
ಸಂಜೆಯಲ್ಲಿ ನಡೆಯುವ ಸಂತೆಗೆ  ದಿನದ ವ್ಯಾಪಾರ ಮುಗಿಸಿ ಮೂಟೆ ಕಟ್ಟುವ ತವಕ, ಮಿಕ್ಕ ಸರಕಿಗೆ ಗಿರಾಕಿ ಹುಡುಕುವ ತವಕ, ವ್ಯಾಪಾರದ ಲಾಭ ಮತ್ತು ನಷ್ಟ ಲೆಕ್ಕ ಹಾಕುವ ತವಕ, ಬಂದ ಲಾಭದಲ್ಲಿ ತುರ್ತಾಗಿ ಮುಗಿಸಲೆಬೇಕಾದ ಕೆಲಸಗಳ ತವಕ, ನಮ್ಮ ಜೀವನ ಎಲ್ಲಾ ಆಗು ಹೋಗುಗಳ ಜೊತೆ ತಳಕು ಹಾಕಿಕೊಂಡಂತೆ ಈ ಸಂಜೆ ಸಂತೆ.
ಬದುಕಿನ ಎಷ್ಟೋ ಸಂಜೆಗಳು ನಿರರ್ಥಕವಾಗಿ ಕಳೆದಿವೆ, ಇವುಗಳಿಗೆ ಅರ್ಥ ಹುಡುಕುವುದು ತಪ್ಪಾಗಿ ಕಾಣಿಸುತ್ತದೆನಾಳೆಯಸಂಜೆಗಳು ಅರ್ಥಪೂರ್ಣವಾಗಿರಲಿ, ತಂಪಾಗಿರಲಿ ಮತ್ತು ಇಂಪಾಗಿರಲಿ.
ರಘು .ಎಸ್ .ಪಿ