Nov 11, 2009

ಮರೆತ ಪುಸ್ತಕ

ಅದೇ ಪುಸ್ತಕ
ಹೌದು ಅದೇ ಪುಸ್ತಕ
ನಮ್ಮ ಒಲವಿನ ನೆನಪಾಗಿ ಕೊಟ್ಟ ಪುಸ್ತಕ
ನಮ್ಮಿಬರ ಮಿಲನದ ಕುರುಹಾದ ಪುಸ್ತಕ
ಹೌದು ಅದೇ ಪುಸ್ತಕ
ಮೊದಲ ಅಪ್ಪುಗೆಗೆ ಸಾಕ್ಷಿಯಾದ ಪುಸ್ತಕ
ಮೊದಲ ನೋಟಕ್ಕೆ ಸಹಿಯಾದ ಪುಸ್ತಕ
ಹೌದು ಅದೇ ಪುಸ್ತಕ
ನಮ್ಮಿಬರ ಮಧುರ ಕ್ಷಣಗಳ ನೆನಪಿನ ಆ ಪುಸ್ತಕ
ಇಂದು ಹಳೇ ಪುಸ್ತಕದಂಗಡಿಯಲ್ಲಿ
ನಮ್ಮಿಬರ ಹಳೇ ಪ್ರೀತಿಯಂತೆ
ನಾ ಅವಳ ಮರೆತಂತೆ
ಅವಳು ನನ್ನ ಮರೆತಂತೆ.

"ವಿಹಾರಿ"

Sep 16, 2009

ಮನಸ್ಸಿನ ರಾಮ

ಎತ್ತೆತ್ತ ಓಡಲೋ ರಾಮ
ನಿನ್ನ ಎತ್ತಾಡಿಕೊಂಡು ರಾಮ
ಆತ್ತ ಓಡಿ ನೋಡು ಅಲ್ಲೂ ಜನ
ಇತ್ತ ಓಡಿ ನೋಡು ಅಲ್ಲೂ ಜನ
ಎಲ್ಲಿ ಮುಚ್ಚಲೋ  ನಿನ್ನ ರಾಮ
ಜನದಿಂದ ದೂರ ಎಲ್ಲಿಗೆ ಹೋಗಲೋ ರಾಮ

ಎತ್ತೆತ ಓಡಲೋ  ರಾಮ
ನಿನ್ನ ಎತ್ತಾಡಿಕೊಂಡು ರಾಮ

ಜನ ಕಂಡರೆ ಪ್ರೀತಿಯೋ ನಿನಗೆ ರಾಮ
ನೀನು ಮತ್ತೋಡಿ ಬಿಡುವೆ ಅವರೊಳಗೆ ರಾಮ
ನನ್ನ ಹುಚ್ಚೆಷ್ಟು ನಿನ್ನೆಡೆಗೆ ನೋಡು ರಾಮ
ನಿನ್ನ ಬಿಡಲೊಲ್ಲೆ ನಾ ಎಂದು  ರಾಮ

ಎತ್ತೆತ್ತ ಓಡಲೋ ರಾಮ
ನಿನ್ನ ಎತ್ತಾಡಿಕೊಂಡು ರಾಮ

ಅಂಧಕಾರದಲ್ಲಿ ಈ ಮನುಜನ ಮನಸ್ಸು ರಾಮ
ನಿನ್ನ ಮನದೊಳಗೆ ಬಚ್ಚಿಡಲು ಆಗದಲ್ಲೋ ರಾಮ
ಹುಚ್ಹೆಂತೋ ನನ್ನದಿ ರಾಮ
ಮುಷ್ಟಿಯೋಳಗಿಡಿಯ ಹೊದೆನಲ್ಲೋ ರಾಮ
ಕೊಳೆ ಮನಸ್ಸ ಹೊರತು ಎಲ್ಲೆಲ್ಲು ನೀನೆ ರಾಮ
ಮನಸ್ಸ ಕೊಳೆಯ ತೊಳೆಯ ಹೊರಟಿರುವೆ ನಾನೀಗ ರಾಮ

ಎತ್ತೆತ್ತ ಓಡಲೂ ರಾಮ
ನಿನ್ನ ಎತ್ತಾಡಿಕೊಂಡು ರಾಮ

"ವಿಹಾರಿ"

ಚಿತೆಯೇರಿದ ಚಿಂತೆ

ಚಿಂತೆಯ ಬಿಡಿಸು ಚಿತೆ ಏರಿದ ಮೇಲಾದರೂ
ಇದ್ದಾಗ ನಮ್ಮಿಬರ ಇಹದ ಚಿಂತೆ
ನೀ ಹೋದರು ನಿನ್ನ ಪರದ ಚಿಂತೆ
ಚಿಂತೆಯ ಪಯಣವ ಮುಗಿಸಿ ಹೊರಟಿರುವೆ ನೀನು
ಬಿಡಿಸಲೋಲ್ಲೆಯ ನನ್ನೀ ಇಹ ಪರದ ಚಿಂತೆಯ
ಜೊತೆಯೊಳಗೆ ಹಂಚಿದ್ದೆವು ಜೀವನದ ಚಿಂತೆ,
ಚಿಂತೆಯೊಳಗಿರುವಾಗಲೇ  ನೀ ಸಿಕ್ಕಿದು ಆ ಸಂತೆಯೊಳಗೆ
ಸಂತೆಯೊಳಗೆ ಕುಂತೆ ಮಾಡಿದ್ದೆವು ನಮ್ಮಿಬ್ಬರ  ಮುಂದಿನ ಚಿಂತೆ

ಚಿಂತೆಯ ಬಿಡಿಸು ಚಿತೆ ಏರಿದ ಮೇಲಾದರೂ

ಪಯಣದ ಉದ್ದಕ್ಕೂ ಒಮನಸ್ಸ ಚಿಂತೆ
ಮಕ್ಕಳ ಚಿಂತೆ, ಮಂದಿಯ ಚಿಂತೆ,
ಮನೆ ಕಟ್ಟುವ ಚಿಂತೆ, ಮಕ್ಕಳ ಮದುವೆಯ ಚಿಂತೆ,
ಎಂತೆಂಥ ಚಿಂತೆ,
ಅಂತೆ ಕಂತೆಗಳದೆ ಮುಗಿಯಲಾರದ ದೊಡ್ಡ ಚಿಂತೆ
ಚಿತೆ ಏರುವ ಚಿಂತೆಯಲ್ಲಿ ಒಂಟಿಯಾದೆಯಲ್ಲ
ಬಿಡಿಸಲಾರೆಯ ನನ್ನೀ ಚಿಂತೆಯ
ಚಿಂತೆಯ ಬಿಡಿಸು ಚಿತೆ ಏರಿದ ಮೇಲಾದರೂ.

"ವಿಹಾರಿ"

ನನ್ನೆದೆಯ ಜಾತ್ರೆ

ಊರು ಕೇರಿ ಬೀದಿಯೆಲ್ಲ ಸಿಂಗಾರ
ಜಾತ್ರೆಯದೆ ಆಹಂಕಾರ
ಕಣಳತೆಗು ಹಸಿರು ತೋರಣ ಸಿಂಗಾರ
ಝಳ ಝಳ ರೇಶಿಮೆ ಲಂಗದ
ಪುಟ್ಟ ಹುಡುಗಿಯರ ಝೇಂಕಾರ
ಬೀದಿಗೂ ಬಂದು ನಿಂತ ತುಪ್ಪದಡಿಗೆಯ ಘಮ ಘಮ

ಎಲ್ಲೆಲು ಝೇಂಕಾರ ಜಾತ್ರೆಯ ಆಹಂಕಾರ

ಮನೆಯೊಳಗೆ ಅವಳಿಲ್ಲ

ಏನು ಆ ಸಂಭ್ರಮ
ಜರತಾರಿ ಪಂಚೆ, ಜರತಾರಿ ಸೀರೆ,
ಊರಿಗೆ ನಾವೇ ಹೊಸ ದಂಪತಿಗಳು
ನೋಡಿದ ಕಣೆಷ್ಟು, ನುಡಿದ ಮಾತೆಷ್ಟು,
ವರುಷ ತುಂಬಿದೆ,
ತೇರ ಬೀದಿಯಲ್ಲಿ ಮುಡಿದ ಮಲ್ಲಿಗೆಯ ಘಮವಿದೆ

ಎಲ್ಲೆಲು ಝೇಂಕಾರ ಜಾತ್ರೆಯ ಆಹಂಕಾರ
ಮನೆಯೊಳಗೆ ಅವಳಿಲ್ಲ

ತುಂಬಿತ್ತು ಮನೆ ಘಳ ಘಳ ಕಿಲ ಕಿಲ
ನೆಂಟರು, ಇಷ್ಟರು, ಸ್ನೇಹಿತರು,
ಬಂದವರು, ಹೋದವರು,
ಉಳಿದವರು, ನಡೆದವರು,
ರಥ ಬೀದಿಯಲ್ಲಿ ನಮ್ಮದೇ ಝೇಂಕಾರ
ಹೀಗಿತ್ತು, ಹೀಗಿಲ್ಲ,
ವರುಷದಲ್ಲಿ ಯಾರಿಲ್ಲ
ಯಾಕೆಂದರೆ ಮನೆಯೊಳಗೆ ಅವಳಿಲ್ಲ

ಎಲ್ಲೆಲ್ಲು ಝೇಂಕಾರ
ಜಾತ್ರೆಯ ಆಹಂಕಾರ
ನನ್ನೆದೆಯ ಚೀತ್ಕಾರ.

"ವಿಹಾರಿ"

ನಿನ್ನಾಟ

ಕುದಿಯುತ್ತಿದೆ ಕುದಿಯುತ್ತಿದೆ
ಬೆಳದಿಂಗಳ ತಾಪಕ್ಕೆ
ನನ್ನೆದೆ ಕುದಿಯುತ್ತಿದೆ
ಕುಡಿನೋಟದ ನೆನಪಿಗೆ ಬತ್ತಿದೆ
ಬತ್ತಲಾರದ ಬಯಕೆ
ಬಯಸದೆ ಬಯಕೆಯ ಹೊತ್ತಿಸಿ
ಬರದೂರಿಗೆ ನೆಡೆದೆಯಲ್ಲ
ನಿನ್ನಾಟ ಸರಿಯೇ
ಕಳಚಿತೆ ಆಣೆಗಳ ಸೌಧ
ಮುರಿಯಿತೆ ಮಾತು ಮೌನಗಳ ಕೊಂಡಿ
ಹೊತ್ತಲ್ಲದ ಹೊತ್ತಲ್ಲಿ ಕಿಚಿಟ್ಟು ನೆಡೆದೆಯಲ್ಲ
ಬರದೂರಿಗೆ ನೆಡೆದೆಯಲ್ಲ
ನಿನ್ನಾಟ ಸರಿಯೇ
ಕೆರೆ ಮೇಲಿನ ನೆನಪು
ಹೊಳೆ ದಂಡೆಯ ನೆನಪು
ರಂಗೋಲಿಯ ನೆನಪು
ಸಂಬ್ರಾಣಿ ಸುಪ್ರಭಾತದ ನೆನಪು
ಈ ನೆನಪಿನ ಸುಳಿಯೊಳಗೆ
ಕುದಿಯುತ್ತಿದೆ ನನ್ನೆದೆ ಬೆಳದಿಂಗಳ ತಾಪಕ್ಕೆ .

"ವಿಹಾರಿ"

ಬಯಕೆ

ಬಯಕೆಯೂರಿನ ಬಿಸಿಲಲ್ಲಿ ಉಂಡದ್ದು ಏನು 
ಕಂಡದ್ದು ಏನು ನಡೆದಿದ್ದು ಏನು 
ಹೀಗಿತ್ತು ಹೀಗಿಲ್ಲ 
ನಡೆವ ದಾರಿ 
ಸುರಿವ ಮಂಜು
ಉರಿವ ಬಿಸಿಲು 
ಉಂಡದ್ದು ಒಡಲ ಊಟ, 
ಕಂಡದ್ದು ಕನಸೂಟ
ಎದದ್ದು ಬಯಲಿನ ಅರಮನೆ 
ನಡೆವ ನೆಲ, 
ಕುಡಿದ ಜಲ 
ಕಂಡ ನೋಟ 
ಎಲ್ಲವು ಕನಸೇ
ಓ ಮನಸೇ 
ನೀನೇಕೆ ಚಂಚಲ ನಿದ್ದೆಯೊಳಗೆ.

"ವಿಹಾರಿ"

ಬಸಿರು

ಮಿಂಚಿನ ಜಗದೊಳಗೆ
ಕಂಚಿನ ಕಡಲೊಂದು
ಬೆಂದು ಬಸಿರಾಯಿತೆ
ಅದಾವ ಕಾರಣಕ್ಕೆ ಅದು ಊಸಿರಾಯಿತೆ
ಬಯಸಿತ್ತೆ ಹಡೆಯುವ ಜೀವ
ಬಯಸಿತ್ತೆ ಉಸಿರಾದ ಜೀವ
ಅದಾವ ಕಾರಣಕ್ಕೆ ಅದು ಉಸಿರಾಯಿತೆ
ಎಲ್ಲಿದೋ ಕಡಲು ಎಲ್ಲಿದೋ ಕಡಲು
ಎಲ್ಲಿದೋ ಕಾನನ ನಿಲ್ಲದ ಒತ್ತರದ ಮಿಲನ
ಬಯಸಿತ್ತೆ ಹಡೆಯುವ ಜೀವ
ಅದಾವ ಕಾರಣಕ್ಕೆ ಅದು ಉಸಿರಾಯಿತೆ
ಮೂಡಣದ ಕಿರಣ ಮೈಯ ಸೊಂಕಿತ್ತೆಚರ
ನೆತ್ತರದ ಮಡುವಳಗೆ ಮಿಂದೆ ಸೂರ್ಯೋದಯ
ಯಾರದೋ ಬಯಕೆಯಲ್ಲಿ ನಂದಿತ್ತೆ ನನ್ನ ಒಲವು
ಮಾರುವವರು, ಮುದುಕರು, ಹುಡುಗರು, ಕುರುಡರು, ಕುಂಟರು
ಕತ್ತಲ ಬೆತ್ತಲೊಳಗೆ ಎಲ್ಲರು ಒಂದೇ
ನುಸಿ ಚಳಿಯ ಸಂಜೆಯಲ್ಲಿ ಒಂಟಿ ಎತ್ತಿನಂತೆ ಮನೆಗೆ ಹೊರಟಿದ್ದೆ ತಪ್ಪೇ
ಬಯಸಿತ್ತೆ ಹಡೆಯುವ ಜೀವ
ಬಯಸಿತ್ತೆ ಉಸಿರಾದ ಜೀವ
ಅದಾವ ಕಾರಣಕ್ಕೆ ಅದು ಉಸಿರಾಯಿತೇ.

"ವಿಹಾರಿ"

ನನ್ನಾಕೆ

ನನ್ನಾಕೆ ನಿಂತ ನೀರೋಳಗೊಂದು ಕಮಲ
ನನ್ನಾಕೆಯಿವಳು ಊರ ತೀರ ಕೇರಿಯೇಲ್ಲ
ಹುಡುಕಿ ಹುಡುಕಿ ಬಂದವಳು ನನ್ನಾಕೆ
ನಮ್ಮಾವನ ಪ್ರೀತಿಯ ಸಾಕ್ಷಿಯಿವಳು
ನನ್ನಾಕೆ
ನನ್ನ ಕಂದನ ಅಮ್ಮನಿವಳು
ನನ್ನ ಪ್ರೀತಿಯ ಮುಡಿಪು ಇವಳು
ನನ್ನಾಕೆ
ದುರ್ಗದ ದುರ್ಗಿಯಿವಳು
ಸ್ವರ್ಗದ ರಾಣಿಯಿವಳು
ಬಯಕೆಯುಣಿಸಿ ತಂಪೆರೆವ
ಚಂದಿರನ ಊರಿನವಳು
ನನ್ನಾಕೆ
ನನ್ನ ಕಣ್ಣೀರಿಗೆ ಭೂಮಿಯಿವಳು
ನನ್ನ ತಾಪಕ್ಕೆ ಭೂರ್ಗೆರವ ಮಳೆಯಿವಳು
ನನ್ನಾಕೆ
ಚಿತ್ತದ ಪಿತ್ತವ ನೆತ್ತಿಗೇರಿಸಿ
ಕಿಲ ಕಿಲ ನಗುವ ಬೆಳದಿಂಗಳಿವಳು
ನನ್ನಾಕೆ.

"ವಿಹಾರಿ"

ನನ್ನ ಹುಡುಗಿ

ನಿನ್ನ ಕಂಗಳ ಕಾಂತಿಯಿಂದ
ಊರೆಲ್ಲ ದೀಪಾವಳಿ
ನನ್ನ ಮನಸ್ಸೇಕೆ ಕತ್ತಲು
ನಿನ್ನ ಸ್ಪರ್ಶದಿಂದ
ಊರೆಲ್ಲ ಪುಳಕ
ನನ್ನೀ ಮೈಯೇಕೆ ಕೊರಡು
ನಿನ್ನ ಕಂಠದಿಂದ
ಊರೆಲ್ಲಾ ಝೇಂಕಾರ
ನನ್ನ ಕೊರಲೋಳಗೇಕೆ ಕೊರಡು
ಏಕೀ ಹಠ,
ನಿನ್ನ ಕಣ್ಣಿರಿಂದಲೇ
ನನ್ನ ಪಾಪ ತೊಳೆಯಬೇಕೆಂಬ ಹಠ
. "ವಿಹಾರಿ"

ನೆಲೆಯ ಕೊಳೆ

ಹೊತ್ತವರು ಹೊರನಾಡವರು
ಬಿಟ್ಟವರು ಬೆಡಗ ನಾಡವರು
ಬೆಳಸಿದವರು ಕರುನಾಡವರು
ಒಂದೂರ ನೆಲೆ
ಮುಂದೂರ ಕೊಳೆ
ಮುಂದೂರ ಮಳೆ
ತೊಳೆದಿತ್ತು ಭುವಿಯ ಪಾಪವನೆಲ್ಲ
ಕಲ್ಲಿರುವೆ ಓಡುತ್ತಿದೆ ಗಾಣದೆತ್ತಿನ ಹಾಗೆ
ನಿಲ್ಲದೆ ಓಡುತ್ತಿದೆ
ಹೊರಟೀದ್ದು ಎಲ್ಲಿಗೆ,
ಆ ನನ್ನ ಗೂಡಿಗೆ, ತಪ್ಪಿದೆ ದಾರಿ,
ತಿರುಗಿ ತಿರುಗಿ ಅಲ್ಲೇ ತಿರುಗಿ
ಸುತ್ತಲು ಕಲ್ಲು ,
ಎತ್ತೆತಲು ಕಲ್ಲು
ಜಗತ್ತಿನ ಕೊಳೆ ಮನಸ್ಸಿನ ಹಾಗೆ.
"ವಿಹಾರಿ"

ತೀರ

ಮತ್ತಾವ ಕೊನೆಯಿದೆ ನಿನಗೆ
ಮುಗಿದಿವೆ ಎಲ್ಲಾ ದಡಗಳು
ಮುಳುಗಿವೆ ಒಳ್ಳೆ ದಿನಗಳು
ಇರುಳು ಕತ್ತಲು
ಮುಗಿಯದ ಕತ್ತಲು
ಎತ್ತಣಿಂದ ಎತ್ತಲೋ ಪಯಣ
ಕೊನೆ ಕಾಣದ
ಕರುಣಿಲ್ಲದೆ ಕಾಡುವ
ಕರಿ ಕಣಿವೆಯ ನೆನಪೇ
ನೆನಪೇ ನೀ ಬರೀ ನೆನಪಾಗಿ ಉಳಿಯಲಾರೆಯ.
"ವಿಹಾರಿ"

ಅಲೆಮಾರಿ

ಬಿಡು ಒಳಗಣ್ಣನ್ನು ನೋಡುವೆ 
ಮತ್ತೊಂದು ಜಗತ್ತನು 
ನೀ ಬೇಡುವೆ 
ನಾ ಕೊಡಲಾರೆ  
ಅವ ಕೊಡಲಾರ  
ನೀ ಬೇಡಲಾರೆ  
ಎಲ್ಲಿಂದಲೋ ಬಂದವರು 
ಮುಂದಿನೂರಿನ ಪಯಣದವರು  
ಜೋಡು ಮರದ ಕೆಳಗಿನವರು  
ನೀಲಿ ಆಕಾಶದ ಹೊದಿಕೆಯವರು 
ಮುಂದಿನೂರಿನವರು  
ಹಿಂದಿನೂರು ಅವರದಲ್ಲ  
ಮುಂದಿನೂರು ಅವರದಲ್ಲ 
ಎಲ್ಲಿಂದಲೋ ಬಂದವರು  
ಅಚ್ಚಡದ ಹೊದಿಕೆಯವರು 
ಮಳೆಯೂರಿನ ನೆಂಟರಿವರು 
ಕರೆಯದೆ ಬರುವವರು 
ಹೇಳದೆ ಹೋಗುವವರು 
ಎಲ್ಲಿಂದಲೋ ಬಂದವರು  
"ವಿಹಾರಿ"