Sep 16, 2009

ನನ್ನೆದೆಯ ಜಾತ್ರೆ

ಊರು ಕೇರಿ ಬೀದಿಯೆಲ್ಲ ಸಿಂಗಾರ
ಜಾತ್ರೆಯದೆ ಆಹಂಕಾರ
ಕಣಳತೆಗು ಹಸಿರು ತೋರಣ ಸಿಂಗಾರ
ಝಳ ಝಳ ರೇಶಿಮೆ ಲಂಗದ
ಪುಟ್ಟ ಹುಡುಗಿಯರ ಝೇಂಕಾರ
ಬೀದಿಗೂ ಬಂದು ನಿಂತ ತುಪ್ಪದಡಿಗೆಯ ಘಮ ಘಮ

ಎಲ್ಲೆಲು ಝೇಂಕಾರ ಜಾತ್ರೆಯ ಆಹಂಕಾರ

ಮನೆಯೊಳಗೆ ಅವಳಿಲ್ಲ

ಏನು ಆ ಸಂಭ್ರಮ
ಜರತಾರಿ ಪಂಚೆ, ಜರತಾರಿ ಸೀರೆ,
ಊರಿಗೆ ನಾವೇ ಹೊಸ ದಂಪತಿಗಳು
ನೋಡಿದ ಕಣೆಷ್ಟು, ನುಡಿದ ಮಾತೆಷ್ಟು,
ವರುಷ ತುಂಬಿದೆ,
ತೇರ ಬೀದಿಯಲ್ಲಿ ಮುಡಿದ ಮಲ್ಲಿಗೆಯ ಘಮವಿದೆ

ಎಲ್ಲೆಲು ಝೇಂಕಾರ ಜಾತ್ರೆಯ ಆಹಂಕಾರ
ಮನೆಯೊಳಗೆ ಅವಳಿಲ್ಲ

ತುಂಬಿತ್ತು ಮನೆ ಘಳ ಘಳ ಕಿಲ ಕಿಲ
ನೆಂಟರು, ಇಷ್ಟರು, ಸ್ನೇಹಿತರು,
ಬಂದವರು, ಹೋದವರು,
ಉಳಿದವರು, ನಡೆದವರು,
ರಥ ಬೀದಿಯಲ್ಲಿ ನಮ್ಮದೇ ಝೇಂಕಾರ
ಹೀಗಿತ್ತು, ಹೀಗಿಲ್ಲ,
ವರುಷದಲ್ಲಿ ಯಾರಿಲ್ಲ
ಯಾಕೆಂದರೆ ಮನೆಯೊಳಗೆ ಅವಳಿಲ್ಲ

ಎಲ್ಲೆಲ್ಲು ಝೇಂಕಾರ
ಜಾತ್ರೆಯ ಆಹಂಕಾರ
ನನ್ನೆದೆಯ ಚೀತ್ಕಾರ.

"ವಿಹಾರಿ"

No comments:

Post a Comment